ಕ್ಯಾಲ್ಸಿಯಂ ಕಾರ್ಬೊನೇಟ್
ಸುಣ್ಣಕಲ್ಲು, ಅಮೃತಶಿಲೆ, ಚಾಕ್ ಮತ್ತು ಕ್ಯಾಲ್‍ಸೈಟ್ ರೂಪದಲ್ಲಿ ನೈಸರ್ಗಿಕವಾಗಿ ದೊರೆಯುವ ವಸ್ತು, ಅಚಿಅಔ3. ಸುಣ್ಣದ ತಿಳಿನೀರಿಗೆ ಇಂಗಾಲದ ಡೈ ಆಕ್ಸೈಡನ್ನು ಹಾಯಿಸುವುದರಿಂದ ಇದನ್ನು ತಯಾರಿಸಬಹುದು.

Ca(OH)2 + CO2 (CaCO3( + H2O

ಕ್ಯಾಲ್ಸಿಯಂ ಲವಣದ ದ್ರಾವಣಕ್ಕೆ ಕರಗುವ ಕಾರ್ಬೊನೇಟನ್ನು ಸೇರಿಸುವುದರಿಂದಲೂ ಇದನ್ನು ತಯಾರಿಸಬಹುದು.

CaCl2 + (NH4)2CO3 ( CaCO3( + 2 NH4Cl

ಗುಣಗಳು: ಬೆಳ್ಳಗಿರುವ ಘನವಸ್ತು. ನೀರಿನಲ್ಲಿ ವಿಲೀನವಾಗುವುದಿಲ್ಲ.  ಆಮ್ಲಗಳಲ್ಲಿ ವಿಲೀನವಾಗಿ ಇಂಗಾಲದ ಡೈಆಕ್ಸೈಡನ್ನು ಉತ್ಪಾದಿಸುತ್ತದೆ ಕಾಸಿದರೆ ಇಂಗಾಲದ ಡೈ ಆಕ್ಸೈಡನ್ನು ಬಿಟ್ಟುಕೊಟ್ಟು ವಿಭಜನೆ ಹೊಂದುತ್ತದೆ. 
ಉಪಯೋಗಗಳು :ಕಟ್ಟಡ ಕಟ್ಟುವುದಕ್ಕೆ ಮತ್ತು ನೆಲಕ್ಕೆ ಗಾರೆ ಹಾಕಲು ಇದನ್ನು ಬಳಸುತ್ತಾರೆ. ಇಂಗಾಲದ ಡೈ ಆಕ್ಸೈಡಿನ ತಯಾರಿಕೆಯಲ್ಲಿ, ಸಿಮೆಂಟ್, ಸುಣ್ಣದ ಹರಳು, ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ಗಾಜಿನ ತಯಾರಿಕೆಯಲ್ಲಿ ಇದರ ಉಪಯೋಗ ಉಂಟು.	 							(ಬಿ.ಸಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ